ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಯಲು ವೇದಿಕೆ, ದೊಂದಿ ಬೆಳಕಲ್ಲಿ `ದುಶ್ಯಾಸನ ವಧೆ` !

ಲೇಖಕರು : ಉದಯವಾಣಿ
ಬುಧವಾರ, ಡಿಸೆ೦ಬರ್ 2 , 2015
ಡಿಸೆ೦ಬರ್ 2, 2015

ಬಯಲು ವೇದಿಕೆ, ದೊಂದಿ ಬೆಳಕಲ್ಲಿ `ದುಶ್ಯಾಸನ ವಧೆ` !

ಮಂಗಳೂರು : ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಧ್ವನಿ ಟ್ರಸ್ಟ್‌ ಮಂಗಳೂರು, ವಿಭಿನ್ನ ಮಂಗಳೂರು ಸಂಘಟನೆಗಳ ವತಿಯಿಂದ ಡಿ. 12ರಂದು ಸಂಜೆ 6ರಿಂದ ಬೊಂದೇಲ್‌ನ ಎಂಜಿಸಿ ವಿದ್ಯಾಸಂಸ್ಥೆಯ ಬಯಲು ರಂಗದಲ್ಲಿ "ದುಶ್ಯಾಸನ' ವಧೆ ಕಥಕ್ಕಳಿ-ಯಕ್ಷಗಾನಗಳ ಒಡನಾಟದ ವಿಶಿಷ್ಟ ಪ್ರದರ್ಶನ ನಡೆಯಲಿದೆ.

ಒಂದೇ ವೇದಿಕೆಯಲ್ಲಿ ವಿಶಿಷ್ಟವಾದ ದೊಂದಿ-ಮಂದ ಬೆಳಕಿನಲ್ಲಿ ಒಂದೇ ಕಥಾನಕವನ್ನು ದೇಶದ ಎರಡು ಮಹಾನ್‌ ಸೋದರ ಕಲೆಗಳು ಅಭಿನಯಿಸುವ ಚಾರಿತ್ರಿಕ ಕಲಾನುಭವ ಇದಾಗಲಿದೆ ಎಂದು ಸಂಘಟಕರು ಹೇಳಿದ್ದಾರೆ. ನಗರದೀಪಗಳ ಕೋರೈಸುವಿಕೆ-ಯಂತ್ರ ಸದ್ದುಗಳು ನುಸುಳದ;

ಕಣ್ಮನಗಳಿಗೆ ಆಪ್ತವಾಗುವ ಗಾಢ ಕತ್ತಲಿನ ಹಸಿರು ಮರಗಳ ಬಯಲಿನಲ್ಲಿ ರಾತ್ರಿ 12ರ ವರೆಗೆ ಈ ಪ್ರದರ್ಶನವಿದೆ.

ಸಂಜೆ 6ಕ್ಕೆ ದೊಂದಿ ಪ್ರಜ್ವಲನ; ಕಥಕ್ಕಳಿ-ಬಳಿಕ ಯಕ್ಷಗಾನದ ಪೂರ್ವ

ರಂಗದ ಸಾಂಪ್ರದಾಯಿಕ ಪ್ರದರ್ಶನ. ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಪದ್ಮಶ್ರೀ ಕಲಾಮಂಡಲಂ ಗೋಪಿ ಆಶಾನ್‌ ಅವರ ನೇತೃತ್ವದಲ್ಲಿ ಆಯ್ದ 22 ಪ್ರಬುದ್ಧ ಕಲಾವಿದರ ಬಳಗದಿಂದ ಕಥಕ್ಕಳಿ-ದುಶ್ಯಾಸನ ವಧಂ. ಅನಂತರ ಥಿಯೇಟರ್‌ ಯಕ್ಷ, ಉಡುಪಿ ಮತ್ತು ತೆಂಕುತಿಟ್ಟಿನ ಶ್ರೇಷ್ಠ ಆಯ್ದ ಕಲಾವಿದರ ತಂಡದಿಂದ ತೆಂಕುತಿಟ್ಟು ಯಕ್ಷಗಾನ-ದುಶ್ಯಾಸನ ವಧೆ. ಸಾಂಪ್ರದಾಯಕ "ದುಶ್ಯಾಸನ' ವಧೆಗೆ ಇಲ್ಲಿ ಹೊಸ ಯಕ್ಷ ರಂಗಕಲ್ಪನೆಯನ್ನು ಪೃಥ್ವೀರಾಜ್‌ ಕವತ್ತಾರ್‌ ಅವರ ಸೂತ್ರಧಾರತ್ವದಲ್ಲಿ ಸಂಯೋಜಿಸಲಾಗುತ್ತಿದೆ.

ಮಲೆಯಾಳದ ಕಥಕ್ಕಳಿ ಹಾಗೂ ಕನ್ನಡದ ತೆಂಕುತಿಟ್ಟು ಯಕ್ಷಗಾನ ಸುಮಾರು 450 ವರ್ಷಗಳ ಹಿಂದೆ; ಪಾರ್ತಿಸುಬ್ಬನ ಕಾಲದಿಂದಲೇ ಬೆಳೆದಿರಬಹುದು; ಈ ಸೋದರ ಕಲೆಗಳನ್ನು ಒಂದೇ ಕಥಾನಕದಲ್ಲಿ ಜೋಡಿಸುವ ಪ್ರಯತ್ನವಿದು ಎಂದು ವಿವರಿಸಲಾಗಿದೆ. ಇದನ್ನು ಅಭಯಸಿಂಹ ಅವರು ಅತ್ಯುನ್ನತ ತಂತ್ರಜ್ಞಾನದಲ್ಲಿ ಕಲೆಯ ಸಹಜ ಸೊಗಡಿಗೆ ಪೂರಕವಾಗಿ ದಾಖಲಿಸಿದ್ದಾರೆ.

ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ